ಉತ್ತರ ಪ್ರದೇಶದಲ್ಲೂ ಪ್ರವಾಹ: ಬೋಟ್ನಲ್ಲಿ ತೆರಳಿ ಪರಿಶೀಲನೆ ನಡೆಸಿದ ಸಿಎಂ ಯೋಗಿ - ಈಟಿವಿ ಭಾರತ ಕನ್ನಡ
ವಾರಣಾಸಿ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಮಳೆಯಿಂದ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಇಂದು ವಾರಣಾಸಿಯಲ್ಲಿ ಖುದ್ದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬೋಟ್ ಮೂಲಕ ಅಧಿಕಾರಿಗಳೊಂದಿಗೆ ತೆರಳಿ ಪರಿಸ್ಥಿತಿ ಅವಲೋಕಿಸಿದರು. ನಿರಾಶ್ರಿತ ಕ್ಯಾಂಪ್ಗಳಿಗೂ ಭೇಟಿ ಕೊಟ್ಟ ಅವರು ಪರಿಹಾರ ಸಾಮಗ್ರಿಗಳ ವಿತರಣೆಯ ಕುರಿತು ಮಾಹಿತಿ ಪಡೆದರು.