ರಸ್ತೆ ಬದಿ ಜೋಡಿ ಚಿರತೆಗಳು ಪ್ರತ್ಯಕ್ಷ.. ಬೆಚ್ಚಿಬಿದ್ದ ತಿಪಟೂರು ಜನ - ವಿಡಿಯೋ - ತಿಪಟೂರು ತಾಲೂಕಿನ ಮಾರನಗೆರೆ ಗ್ರಾಮದಲ್ಲಿ ಜೋಡಿ ಚಿರತೆ ಪ್ರತ್ಯಕ್ಷ
ತುಮಕೂರು: ತಿಪಟೂರು ತಾಲೂಕಿನ ಮಾರನಗೆರೆ ಗ್ರಾಮದಲ್ಲಿ ಭಾನುವಾರ ರಾತ್ರಿ ಜೋಡಿ ಚಿರತೆಗಳು ಕಾಣಿಸಿಕೊಂಡಿದ್ದು, ಸುತ್ತಮುತ್ತಲ ಜನರಲ್ಲಿ ಆತಂಕ ಮನೆಮಾಡಿದೆ. ಜಾನುವಾರು ಮತ್ತು ಬೀದಿ ನಾಯಿಗಳನ್ನು ಭಕ್ಷಿಸುತ್ತಿರುವ ಈ ಚಿರತೆಗಳು ರಸ್ತೆಬದಿ ಪ್ರತ್ಯಕ್ಷವಾಗಿವೆಯಂತೆ. ಇದರ ವಿಡಿಯೋವನ್ನು ಸ್ಥಳೀಯರೊಬ್ಬರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಚಿರತೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆಹಿಡಿದು ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.