ಸಿರವಾರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದುಸ್ಥಿತಿ ಕೇಳೋರಿಲ್ಲ - kannadanews
ಕೊಠಡಿಯ ಮೇಲ್ಛಾವಣಿಯತ್ತ ಒಮ್ಮೆ ಕಣ್ಣು ಹಾಯಿಸಿ ನೋಡಿ.. ಈ ಛಾವಣಿ ಇನ್ನೇನು ಮೈಮೇಲೆ ಬೀಳುತ್ತದೆ ಅನ್ನೋ ಭಯ ಶುರುವಾಗುತ್ತದೆ. ಅಲ್ಲಲ್ಲಿ ಬಿರುಕು ಬಿಟ್ಟಿರುವ ಗೋಡೆಗಳು.. ಸುಣ್ಣ ಬಣ್ಣವನ್ನೇ ಕಾಣದ ಕೊಠಡಿಗಳು... ಇದ್ಯಾವುದೋ ಹಳೆಯ ಪಾಳು ಬಂಗಲೆಯ ಸ್ಟೋರಿಯಲ್ಲ. ಪ್ರತಿದಿನ ಮಕ್ಕಳು ವಿದ್ಯೆ ಕಲಿಯಲು ಹೋಗುವ ಸರ್ಕಾರಿ ಶಾಲೆಯ ಚಿತ್ರಣ. ಬಳ್ಳಾರಿ ತಾಲೂಕಿನ ಅಣತಿ ದೂರದಲ್ಲಿರುವ ಸಿರವಾರ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ದುಸ್ಥಿತಿ. ಈ ಶಾಲೆ ಶಿಥಿಲಾವಸ್ಥೆ ತಲುಪಿದ್ದು, ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ವಿದ್ಯೆ ಕಲಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.