ಗೂಗಲ್ ರೀಡ್ ಮ್ಯಾರಥಾನ್: ದಾಖಲೆ ನಿರ್ಮಿಸಿದ ತಮಿಳುನಾಡಿನ ವಿದ್ಯಾರ್ಥಿಗಳು - ಗೂಗಲ್ ರೀಡ್‌ನಲ್ಲಿ ದಾಖಲೆ ನಿರ್ಮಿಸಿದ ತಮಿಳುನಾಡಿನ ವಿದ್ಯಾರ್ಥಿಗಳು
ಚೆನ್ನೈ(ತಮಿಳುನಾಡು): ರಾಜ್ಯಾದ್ಯಂತ ಜೂ.1 ರಂದು ವಿದ್ಯಾರ್ಥಿಗಳ ಓದುವ ಹವ್ಯಾಸವನ್ನು ಉತ್ತೇಜಿಸಲು 'ಇಲ್ಲಂ ತೇಡಿ ಕಲ್ವಿ' (Illam Thedi Kalvi) ಅಭಿಯಾನವನ್ನು ಪ್ರಾರಂಭಿಸಲಾಯಿತು. ಈ ಹೋಮ್ ಸರ್ಚ್ ಎಜುಕೇಶನ್ ಪ್ರೋಗ್ರಾಂನಲ್ಲಿ ಬಳಸಲಾದ ಗೂಗಲ್ ರೀಡ್ ಅಲಾಂಗ್ ಪ್ರೊಸೆಸರ್ ಅನ್ನು ತಮಿಳುನಾಡಿನ ವಿದ್ಯಾರ್ಥಿಗಳು ವ್ಯಾಪಕವಾಗಿ ಬಳಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಗೂಗಲ್‌ನ ರೀಡ್ ಅಲಾಂಗ್ ಅಪ್ಲಿಕೇಶನ್‌ನ ಸಹಯೋಗದೊಂದಿಗೆ ತಮಿಳುನಾಡು ಶಿಕ್ಷಣ ಇಲಾಖೆ ಇದನ್ನು 'ರೀಡಿಂಗ್ ಮ್ಯಾರಥಾನ್' ಎಂದು ಕರೆದಿದೆ. ಮಕ್ಕಳಲ್ಲಿ ಓದುವ ಹವ್ಯಾಸವನ್ನು ಉತ್ತೇಜಿಸಲು ಈ ಡಿಜಿಟಲ್ ಮಧ್ಯಸ್ಥಿಕೆಯಲ್ಲಿ ಸುಮಾರು 1.81 ಇಲ್ಲಂ ತೇಡಿ ಕಲ್ವಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಶನಿವಾರದ ವೇಳೆಗೆ, ಜೂ.1 ರಿಂದ ಜೂನ್ 12 ರವರೆಗೆ ಸುಮಾರು 18.36 ಲಕ್ಷ ವಿದ್ಯಾರ್ಥಿಗಳು ಅಪ್ಲಿಕೇಶನ್ ಮೂಲಕ 263 ಕೋಟಿ ಪದಗಳನ್ನು ಓದಿದ್ದಾರೆ ಎಂದು ವಿಶೇಷ ಅಧಿಕಾರಿ (ಇಲ್ಲಂ ತೇಡಿ ಕಲ್ವಿ) ಇಳಂಬಗವತ್ ಹೇಳಿದ್ದಾರೆ.