ಶೃಂಗೇರಿಯ ತುಂಗಾ ತೀರದಲ್ಲಿ ಕಣ್ಮನ ಸೆಳೆಯುವ ಮೀನುಗಳು! - kannadanews
ಮಲೆನಾಡು ಪ್ರವಾಸಿಗರ ಸ್ವರ್ಗದ ತಾಣ. ಹಸಿರು ಸೀರೆಯುಟ್ಟು ನಿಂತಿರುವ ಇಲ್ಲಿನ ಪ್ರಕೃತಿ ದೇವತೆ ಪ್ರವಾಸಿಗರನ್ನು ಪ್ರತಿನಿತ್ಯ ಕೈಬೀಸಿ ಕರೆಯುತ್ತಿದ್ದಾಳೆ. ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಯಾತ್ರಾ ಸ್ಥಳ ಶೃಂಗೇರಿಯ ಶ್ರೀ ಶಾರದಾ ಪೀಠ ಆಧ್ಯಾತ್ಮಿಕ ಮತ್ತು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತರು ವಿದ್ಯಾಧಿದೇವತೆ ಶ್ರೀ ಶಾರದಾಂಬೆಯ ದರ್ಶನ ಮತ್ತು ಜಗದ್ಗುರುಗಳ ಆಶೀರ್ವಾದ ಪಡೆದು ಕೃತಾರ್ಥರಾದರೆ ಪ್ರವಾಸಿಗರು ತುಂಗಾ ನದಿಯಲ್ಲಿರುವ ಸಹಸ್ರಾರು ಮೀನುಗಳನ್ನು ಕಂಡು ಪುಳಕಿತರಾಗುತ್ತಿದ್ದಾರೆ.