ರಸ್ತೆಯೊಳಗಿಂದ ಹೊರ ಬರುತ್ತಿದ್ದ ಹೊಗೆ! ನಾಲ್ಕು ಗಂಟೆ ಶ್ರಮಿಸಿ ನಂದಿಸಿದ ಅಗ್ನಿಶಾಮಕ ದಳ- ವಿಡಿಯೋ - ಭೂಮಿಯಲ್ಲಿ ದಿಢೀರ್ ಹೊಗೆ
ದುಮ್ಕಾ(ಜಾರ್ಖಂಡ್): ಇಲ್ಲಿನ ವಿಮಾನ ನಿಲ್ದಾಣ ರಸ್ತೆಯ ರಾಜಭವನದ ಮುಖ್ಯರಸ್ತೆ ಬದಿಯಲ್ಲಿ ದಿಢೀರ್ ಆಗಿ ಹೊಗೆ ಕಾಣಿಸಿಕೊಂಡಿತು. ಮಾಹಿತಿ ಪಡೆದುಕೊಂಡು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ನಂದಿಸಿದರು. ದಿಢೀರ್ ಹೊಗೆ ಕಾಣಿಸಿಕೊಂಡಿದ್ದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು. ಹೀಗಾಗಿ, ಈ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ. ಯಾವ ಕಾರಣಕ್ಕಾಗಿ ಭೂಮಿಯಲ್ಲಿ ಹೊಗೆ ಕಾಣಿಸಿಕೊಂಡಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.