ಮನೆಯಿಂದ ಹೊರಡುವ ಮುನ್ನ ತಾಯಿಯ ಆಶೀರ್ವಾದ ಪಡೆದ ಸಂಜಯ್ ರಾವುತ್: ವಿಡಿಯೋ - ತಾಯಿಯ ಆಶೀರ್ವಾದ ಪಡೆದ ರಾವುತ್
ಮುಂಬೈ: ಶಿವಸೇನಾ ನಾಯಕ, ರಾಜ್ಯಸಭಾ ಸಂಸದ ಸಂಜಯ್ ರಾವುತ್ ಅವರನ್ನು ಭಾನುವಾರ ಮಧ್ಯರಾತ್ರಿ ಇಡಿ ಬಂಧಿಸಿದೆ. ಮನೆಯಿಂದ ಹೊರಡುವ ಮುನ್ನ ಸಂಜಯ್ ರಾವುತ್ ತಾಯಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದಿದ್ದಾರೆ. ಅವರ ತಾಯಿ ಆರತಿ ಮಾಡಿ ಮಗನನ್ನು ಅಪ್ಪಿಕೊಂಡರು. ಈ ಭಾವನಾತ್ಮಕ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.