ಚಲಿಸುತ್ತಿದ್ದ ರೈಲಿನಡಿ ಸಿಕ್ಕಿಹಾಕಿಕೊಳ್ತಿದ್ದ ವ್ಯಕ್ತಿಯ ಕಾಪಾಡಿದ ಆರ್ಪಿಎಫ್ ಸಿಬ್ಬಂದಿ - ಮಹಾರಾಷ್ಟ್ರ
ಮುಂಬೈ: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ವ್ಯಕ್ತಿಯೋರ್ವ ಪ್ಲಾಟ್‌ಫಾರ್ಮ್‌ನ ಅಂಚು ಹಾಗೂ ರೈಲಿನ ಮಧ್ಯೆ ಸಿಕ್ಕಿಹಾಕಿಕೊಳ್ಳುತ್ತಿದ್ದಾಗ ಆತನನ್ನು ಪ್ರಾಣಾಪಾಯದಿಂದ ಆರ್ಪಿಎಫ್ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ನಡೆದಿದೆ. ಮಹಾರಾಷ್ಟ್ರದ ಕಲ್ಯಾಣ ರೈಲ್ವೆ ಸ್ಟೇಷನ್ನಲ್ಲಿನ ಸಿಸಿಟಿವಿಯಲ್ಲಿ ಘಟನೆಯ ದೃಶ್ಯ ಸೆರೆಯಾಗಿದೆ. ರೈಲು ಹತ್ತಲು ಹೋಗಿರುವ ವ್ಯಕ್ತಿ ಆಯತಪ್ಪಿ ಪ್ಲಾಟ್ಫಾರ್ಮ್ ಹಾಗೂ ಟ್ರ್ಯಾಕ್ ನಡುವೆ ಸಿಕ್ಕಿಹಾಕಿಕೊಂಡಿದ್ದ. ಇದನ್ನು ಗಮನಿಸಿದ ಆರ್ಪಿಎಫ್ ಸೆಕ್ಯುರಿಟಿ ಸೋಮನಾಥ್ ಮಹಾಜನ್ ತಕ್ಷಣ ಧಾವಿಸಿ ಅಪಾಯದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಬಚಾವ್ ಮಾಡಿದರು.