ಕರ್ನಾಟಕ

karnataka

ವಿಡಿಯೋ: ನಾಡಿಗೆ ಬಂದ ಅಳಿವಿನಂಚಿನ ಪ್ರಾಣಿ ಚಿಪ್ಪು ಹಂದಿ ರಕ್ಷಿಸಿದ ಜನರು

By

Published : Sep 18, 2022, 1:24 PM IST

ಆನೇಕಲ್: ಆನೇಕಲ್-ಹೊಸೂರು ಮುಖ್ಯ ರಸ್ತೆಯ ಬಡಾವಣೆಯಲ್ಲಿ ಕಂಡುಬಂದ ಅಳಿವಿನ ಅಂಚಿನಲ್ಲಿರುವ ಪ್ರಾಣಿ ಚಿಪ್ಪು ಹಂದಿಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಸಮಂದೂರು ಬ್ಯಾಟರಾಜು ಅವರ ತಂಡವು ಚಿಪ್ಪು ಹಂದಿ ರಕ್ಷಿಸಿ ಬನ್ನೇರುಘಟ್ಟ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದೆ. ಈ ಬಗ್ಗೆ ಮಾತನಾಡಿರುವ ವನ್ಯಜೀವಿ ಸಂರಕ್ಷಣಾಧಿಕಾರಿ ರಂಜಿತಾ, ಚಿಪ್ಪು ಹಂದಿಯು ಸಾಮಾನ್ಯವಾಗಿ ತನ್ನ ಉದ್ದವಾದ ನಾಲಗೆಯಿಂದ ಗೆದ್ದಲು ಹುಳ ಮತ್ತು ಇರುವೆಗಳನ್ನು ಸೇವಿಸಿ ಬದುಕುತ್ತದೆ. ಅದರ ಮೈಮೇಲಿನ ಚಿಪ್ಪು ಮನುಷ್ಯನ ಲೈಂಗಿಕ ಶಕ್ತಿಯನ್ನು ವೃದ್ದಿಸುವ ಶಕ್ತಿ ಹೊಂದಿದೆ ಎಂಬ ಮೂಢನಂಬಿಕೆಯಿಂದ ಇದು ಬೇಟೆಗಾರರ ಪಾಲಾಗುತ್ತಿದೆ. ಅಳಿವಿನಂಚಿನಲ್ಲಿರುವ ಈ ಪ್ರಾಣಿಯನ್ನು ರಕ್ಷಿಸಿರುವುದು ಮಾನವೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details