'ಗರ್ಭಿಣಿ ಮಾರ್ಗಮಧ್ಯೆಯೇ ಮಗುವಿಗೆ ಜನ್ಮ ನೀಡಬಹುದು, ಹಾಗಿದೆ ನಮ್ಮ ರಸ್ತೆಗಳ ದುಸ್ಥಿತಿ' - ಸಚಿವ ವಿಶ್ವೇಂದ್ರ ಸಿಂಗ್
ಜೈಪುರ: ರಾಜಸ್ಥಾನ ಸರ್ಕಾರದ ಸಚಿವ ವಿಶ್ವೇಂದ್ರ ಸಿಂಗ್, ರಾಜ್ಯದ ರಸ್ತೆಗಳ ದುಸ್ಥಿತಿ ಕಂಡು ಬಹಿರಂಗ ಸಭೆಯಲ್ಲಿ ತಮ್ಮದೇ ಸರ್ಕಾರದ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ. "ನಮ್ಮ ರಸ್ತೆಗಳು ಯಾವ ಮಟ್ಟಿಗೆ ಹದಗೆಟ್ಟಿವೆ ಎಂದರೆ, ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಆಕೆ ಮಗುವಿಗೆ ಜನ್ಮ ನೀಡಬಹುದು" ಎಂದರು. ಪ್ರವಾಸೋದ್ಯಮ ಸಚಿವರಾಗಿರುವ ವಿಶ್ವೇಂದ್ರ ಸಿಂಗ್ ರಸ್ತೆ ದುರವಸ್ಥೆಯನ್ನು ವೇದಿಕೆಯಲ್ಲೇ ಇದ್ದ ಪಿಡಬ್ಲ್ಯೂಡಿ ಸಚಿವ ಭಜನ್‌ಲಾಲ್ ಜಟವ್ ಅವರಿಗೆ ಈ ರೀತಿ ವಿವರಿಸಿ ಬೇಸರ ವ್ಯಕ್ತಪಡಿಸಿದರು. ಸಾರ್ವಜನಿಕ ವೇದಿಕೆಯಲ್ಲಿ ನಡೆದ ಪ್ರಸಂಗ ಸರ್ಕಾರಕ್ಕೆ ಇರಿಸುಮುರಿಸು ಉಂಟು ಮಾಡಿದೆ.