ಕರ್ನಾಟಕ

karnataka

ETV Bharat / videos

ಧಾರವಾಡ ಜಿಲ್ಲೆಯಲ್ಲಿ ವರುಣನ ಅಬ್ಬರ.. ಹಳ್ಳದಲ್ಲಿ ಸಿಲುಕಿದ್ದ ಆರು ಜನರ ರಕ್ಷಣೆ - ಧಾರವಾಡದಲ್ಲಿ ಮಳೆ

By

Published : Sep 6, 2022, 12:54 PM IST

ಧಾರವಾಡ ಜಿಲ್ಲೆಯಾದ್ಯಂತ ಮಳೆರಾಯನ ಆರ್ಭಟಕ್ಕೆ ಜನರು ತತ್ತರಿಸಿ ಹೋಗಿದ್ದು, ಕುಂದಗೋಳ ತಾಲೂಕು ಗ್ರಾಮೀಣ ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಮನೆಗಳಿಗೆ ಹಾನಿಯಾಗಿದೆ. ಕಳೆದ ರಾತ್ರಿ ಮೂರ್ನಾಲ್ಕು ಗಂಟೆಗಳಿಂದ ನಿರಂತರ ಮಳೆಯಾದ ಪರಿಣಾಮ ತಾಲೂಕಿನ ಬೆನಕನಹಳ್ಳಿ, ಚಿಕ್ಕನರ್ತಿ ಸೇರಿದಂತೆ ಹಲವು ಗ್ರಾಮಗಳ ಮನೆಗಳಿಗೆ ನೀರು ನುಗ್ಗಿ ಜನರು ನೀರು ಹೊರ ಹಾಕಲು ಹರಸಾಹಸಪಟ್ಟರು. ಹಳಿಯಾಳ- ಕಡಪಟ್ಟಿ ಗ್ರಾಮದ ಹಳ್ಳ ತುಂಬಿ ಹರಿದಿದ್ದು, ಹಳ್ಳದ ಪ್ರವಾಹದಲ್ಲಿ ಸಿಲುಕಿದ ಆರು ಜನರನ್ನು ಅಗ್ನಿ ಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ ಪ್ರಕಾಶ್ ನಾಶಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ABOUT THE AUTHOR

...view details