ಕಲಬುರಗಿಯಲ್ಲಿ ನವರಾತ್ರಿ ಸಂಭ್ರಮ: ಮಹಿಳೆಯರಿಂದ ದಾಂಡಿಯಾ ನೃತ್ಯ - VIDEO - women dance in kalaburagi
ಕಲಬುರಗಿ: ಕಲಬುರಗಿಯಲ್ಲಿ ನವರಾತ್ರಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ದಾಂಡಿಯಾ ನೃತ್ಯಕ್ಕೆ ಯುವತಿಯರು ಸಖತ್ ಸ್ಟೆಪ್ ಹಾಕುವ ಮೂಲಕ ಸಂಭ್ರಮಿಸಿದರು. ಜೇವರ್ಗಿ ಕಾಲೋನಿಯ ಸಾಂಸ್ಕೃತಿಕ ಬಳಗದ ವತಿಯಿಂದ ನಗರದ ಜಯತೀರ್ಥ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ದಾಂಡಿಯಾ ನೈಟ್ ಕಾರ್ಯಕ್ರಮದಲ್ಲಿ ಮಕ್ಕಳು, ಯುವತಿಯರು, ಮಹಿಳೆಯರು ಭಾಗವಹಿಸಿ ತಡರಾತ್ರಿವರೆಗೆ ಕುಣಿದು ಕುಪ್ಪಳಿಸಿದರು.