ನೋಡಿ: ಕೋಳಿ ಸಮೇತ 8 ಮೊಟ್ಟೆ ನುಂಗಿ, ಹೊರಹಾಕಿದ ನಾಗರಹಾವು! - ಮೊಟ್ಟೆ ನುಂಗಿ ಹೊರಹಾಕಿದ ಹಾವು
ಮಂಡಲ್(ಮಧ್ಯಪ್ರದೇಶ): ಜನವಸತಿ ಪ್ರದೇಶಕ್ಕೆ ಲಗ್ಗೆ ಹಾಕಿರುವ ನಾಗರಹಾವೊಂದು ಕೋಳಿಸಮೇತ 8 ಮೊಟ್ಟೆಗಳನ್ನು ನುಂಗಿರುವ ಘಟನೆ ಮಧ್ಯಪ್ರದೇಶದ ಮಂಡಲ್ದಲ್ಲಿ ನಡೆದಿದೆ. ಇಷ್ಟೊಂದು ಮೊಟ್ಟೆ ನುಂಗಿರುವ ಹಾವು ಸಂಚರಿಸಲು ಸಾಧ್ಯವಾಗದೆ ಎಲ್ಲ ಮೊಟ್ಟೆಗಳನ್ನೂ ಒಂದೊಂದಾಗಿ ಹೊರಹಾಕಿತು. ಮಂಡಲ್ ಜಿಲ್ಲೆಯ 11ನೇ ವಾರ್ಡ್ನಲ್ಲಿ ಫೂಲ್ ಬಾಯಿ ಎಂಬುವವರ ಮನೆಯೊಳಗೆ ಆರಡಿ ಉದ್ದದ ಹಾವು ನುಗ್ಗಿದ್ದು, ಮೊದಲು ಕೋಳಿ ನುಂಗಿದೆ. ಇದಾದ ಬಳಿಕ ಅದರ ಎಂಟು ಮೊಟ್ಟೆಗಳನ್ನು ನುಂಗಿದೆ. ಇದನ್ನು ನೋಡಿರುವ ಕುಟುಂಬಸ್ಥರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಉರಗ ತಜ್ಞ ರಂಜಿತ್ ಠಾಕೂರ್ ಸಹಾಯದಿಂದ ಹಾವನ್ನು ರಕ್ಷಿಸಿ, ಕಾಡಿಗೆ ಬಿಡಲಾಗಿದೆ.