ಚೆನ್ನೈನಲ್ಲಿ 10ನೇ ರಾಷ್ಟ್ರೀಯ ಸಮುದ್ರ ಪಾರುಗಾಣಿಕಾ ತಾಲೀಮು: ವಿಡಿಯೋ
ಚೆನ್ನೈ (ತಮಿಳುನಾಡು): ಭಾರತೀಯ ಕೋಸ್ಟ್ ಗಾರ್ಡ್ ಭಾನುವಾರ ಚೆನ್ನೈನಲ್ಲಿ 10ನೇ ರಾಷ್ಟ್ರೀಯ ಸಮುದ್ರ ಪಾರುಗಾಣಿಕಾ ಅಭ್ಯಾಸ(SAREX -22)ವನ್ನು ನಡೆಸಿತು. 16 ದೇಶಗಳಿಂದ 24 ಮಂದಿ ವೀಕ್ಷಕರು ಅಭ್ಯಾಸದಲ್ಲಿ ಭಾಗವಹಿಸಿದ್ದರು. ನಾವು ಪ್ರತಿ 2 ವರ್ಷಗಳಿಗೊಮ್ಮೆ ಸಮುದ್ರ ಪಾರುಗಾಣಿಕಾ ಅಭ್ಯಾಸ ಮಾಡುತ್ತೇವೆ. ಈ ಬಾರಿ ವಿಭಿನ್ನ ವಿಷಯವೆಂದರೆ ಎರಡು ಸಾಮೂಹಿಕ ಪಾರುಗಾಣಿಕಾ ಅಭ್ಯಾಸ ಮಾಡಲಾಗಿದೆ. ಒಂದು ಪ್ರಯಾಣಿಕ ನೌಕೆ ಒಳಗೊಂಡಿದ್ದರೆ, ಇನ್ನೊಂದು ಪ್ರಯಾಣಿಕ ವಿಮಾನ ಒಳಗೊಂಡಿತ್ತು. ಈ ಮೂಲಕ ನಮ್ಮ ಸಾಮರ್ಥ್ಯ ಹೆಚ್ಚಿಸುತ್ತಿದ್ದೇವೆ ಎಂದು ಭಾರತೀಯ ಕೋಸ್ಟ್ ಗಾರ್ಡ್ ಮುಖ್ಯಸ್ಥ ವಿ.ಎಸ್ ಪಠಾನಿಯಾ ಹೇಳಿದರು. ವಿಮಾನಗಳು ತುರ್ತು ಸಂದರ್ಭಗಳಲ್ಲಿ ಹಡಗುಗಳು ಮತ್ತು ವಿಮಾನಗಳಿಂದ ಪ್ರಯಾಣಿಕರನ್ನು ರಕ್ಷಿಸುವ ವಿಧಾನಗಳನ್ನು ಪ್ರದರ್ಶಿಸಿದವು ಎಂದು ಭಾರತೀಯ ಕೋಸ್ಟ್ ಗಾರ್ಡ್ ಟ್ವೀಟ್ ಮಾಡಿದೆ.