ಆನೆಗೆ ಡಿಕ್ಕಿ ಹೊಡೆದ ರಾಜಧಾನಿ ಎಕ್ಸ್‌ಪ್ರೆಸ್ : ತಾಯಿ ಮತ್ತು ಮರಿ ಗಜ ಸಾವು - ಈಟಿವಿ ಭಾರತ ಕನ್ನಡ
ಜೋರ್ಹತ್ (ಅಸ್ಸೋಂ) : ಟಿಟಾಬೋರ್‌ನಲ್ಲಿ ಇಂದು ಮುಂಜಾನೆ ವೇಳೆ ರೈಲು ಆನೆಗೆ ಗುದ್ದಿದ್ದು, ಎರಡು ಗಜಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ದಿಬ್ರುಗಢಕ್ಕೆ ಹೊರಟಿದ್ದ ರಾಜಧಾನಿ ಎಕ್ಸ್‌ಪ್ರೆಸ್ ರೈಲಿಗೆ ಅಪಘಾತ ಸಂಭವಿಸಿದ್ದು ಹೆಣ್ಣಾನೆ ಮತ್ತು ಅದರ ಮರಿ ಸಾವನ್ನಪಿದೆ. ಇನ್ನೊಂದು ಆನೆಯ ಕಾಲಿಗೆ ತೀರ್ವವಾದ ಗಾಯವಾಗಿದೆ. ಮುಂಜಾನೆ ಐದರ ವೇಳೆ ಘಟನೆ ಸಂಭವಿಸಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.