ಮಹಾಮಳೆಗೆ ಮುಳುಗಿದ ಮಹಾನಗರಿ: ಭಾರಿ ಮಳೆಗೆ ನದಿಯಂತಾದ ಬೆಂಗಳೂರು ರಸ್ತೆಗಳು - ಬೆಂಗಳೂರಿನಲ್ಲಿ ದಾಖಲೆ ಮಳೆ
ದಾಖಲೆಯ ಮಳೆಗೆ ರಾಜಧಾನಿ ಬೆಂಗಳೂರು ಅಕ್ಷರಶಃ ತತ್ತರಿಸಿದೆ. ಭಾನುವಾರ ರಾತ್ರಿಯಿಡೀ ಸುರಿದ ಮಳೆಗೆ ಜನರು ಪರದಾಡಿದ್ದಾರೆ. ಬಹುತೇಕ ರಸ್ತೆಗಳು ತುಂಬಿ ಹರಿಯುವ ನದಿಗಳಂತಾಗಿವೆ. ಕೇವಲ 24 ಗಂಟೆಗಳಲ್ಲಿ 88 ಮಿಮೀ ಮಳೆಯಾಗಿದೆ. 2014ರ ಬಳಿಕ ಸುರಿದ ಅತಿಹೆಚ್ಚಿನ ಮಳೆ ಇದೆಂದು ಹೇಳಲಾಗುತ್ತಿದೆ. ಹೀಗಾಗಿ, ಅನೇಕ ಸ್ಥಳಗಳಲ್ಲಿ ಅವಾಂತರ ಸೃಷ್ಟಿಯಾಗಿದೆ. ಮುಖ್ಯವಾಗಿ ಮಾರತ್ತಹಳ್ಳಿ, ವರ್ತೂರು, ಬೆಳ್ಳಂದೂರು, ಹೆಚ್ಎಎಲ್ ಏರ್ಪೋರ್ಟ್, ತಾವರಕೆರೆ, ಸಾತನೂರು ಸೇರಿದಂತೆ ಅನೇಕ ಕಡೆಗಳಲ್ಲಿ ರಸ್ತೆಯಲ್ಲಿ ಮಳೆನೀರು ತುಂಬಿಕೊಂಡಿದೆ. ಹಾಗಾಗಿ, ರಸ್ತೆಗಳು ಕರೆಯಂತಾಗಿವೆ. ಮಾರತ್ತಹಳ್ಳಿ-ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ ಬೆಳಗ್ಗೆಯಿಂದಲೇ ಟ್ರಾಫಿಕ್ ಜಾಮ್ ಕಂಡುಬಂತು. ಮಹಾನಗರಿಯ ತಗ್ಗು ಪ್ರದೇಶಗಳಲ್ಲಿರುವ ಅನೇಕ ಮನೆಗಳಿಗೆ ನೀರು ನುಗ್ಗಿದೆ.