ಸೈಕಲ್ ಏರಿ ಕಲ್ಯಾಣ ಮಂಟಪಕ್ಕೆ ಬಂದ ವರ.. ಇದಕ್ಕೂ ಒಂದು ಕಾರಣವಿದೆಯಂತೆ!
ಭುವನೇಶ್ವರ್: ಮದುವೆ ಮಾಡಿಕೊಳ್ಳುವ ಸಂದರ್ಭದಲ್ಲಿ ಕುದುರೆ, ಐಷಾರಾಮಿ ಕಾರು, ಬೈಕ್ ಅಥವಾ ಟ್ರ್ಯಾಕ್ಟರ್ಗಳಲ್ಲಿ ವರ ಬರುವುದು ಸರ್ವೆ ಸಮಾನ್ಯ. ಆದರೆ, ಇಲ್ಲೋರ್ವ ಮದುವೆ ಗಂಡು ಕಲ್ಯಾಣ ಮಂಟಪಕ್ಕೆ ಸೈಕಲ್ ಏರಿ ಬಂದಿದ್ದಾನೆ. ಭುವನೇಶ್ವರದ ಯುನಿಟ್-III ಪ್ರದೇಶದ ಸುಭ್ರಾಂಶು ಸಮಲ್ ಈ ರೀತಿಯಾಗಿ ಸೈಕಲ್ ಏರಿ ಬಂದಿದ್ದಾನೆ. ದೇಶದಲ್ಲಿ ತೈಲ ಬೆಲೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ತಾನೂ ಈ ನಿರ್ಧಾರ ಕೈಗೊಂಡಿರುವುದಾಗಿ ಆತ ಹೇಳಿಕೊಂಡಿದ್ದಾನೆ. ಕಲ್ಯಾಣ ಮಂಟಪಕ್ಕೆ ಆತ ಬರುವುದಕ್ಕೂ ಮುಂಚಿತವಾಗಿ ವಧುವಿನ ಕುಟುಂಬಸ್ಥರಿಂದ ಒಪ್ಪಿಗೆ ಪಡೆದುಕೊಂಡಿದ್ದನಂತೆ.