ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಿ ಸನ್ನಿಧಿಯಲ್ಲಿ ಹಬ್ಬದ ಸಂಭ್ರಮ - ಕರ್ನಾಟಕದ ಏಕೈಕ ಜನಪ್ರಿಯ ಲಕ್ಷ್ಮಿ ದೇವಸ್ಥಾನ
ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತುಮಕೂರಿನ ಗೊರವನಹಳ್ಳಿಯ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ರಾಜ್ಯ ಸೇರಿದಂತೆ ನೆರೆ ರಾಜ್ಯಗಳಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ರಾಜ್ಯದ ಏಕೈಕ ಲಕ್ಷ್ಮಿ ದೇವಸ್ಥಾನ ಇದಾಗಿದ್ದು ಕರ್ನಾಟಕದ ಕೊಲ್ಹಾಪುರ ಎಂದೂ ಪ್ರಸಿದ್ದಿ ಹೊಂದುತ್ತಿದೆ. ಇಂದು ಬೆಳಗ್ಗೆಯಿಂದಲೇ ದೇವಿಗೆ ವಿಶೇಷ ಪೂಜೆ ನೆರವೇರಿಸಿ, ಹೂವಿನ ಅಲಂಕಾರ ಮಾಡಲಾಗಿದೆ. ಮಹಿಳೆಯರಿಗೆ ಅರಿಶಿಣ-ಕುಂಕುಮ, ಹಸಿರು ಬಳೆಗಳನ್ನು ಪ್ರಸಾದದ ರೂಪದಲ್ಲಿ ನೀಡಲಾಯಿತು.