ಯಕ್ಕಸಕ್ಕಾ... ಯಕ್ಕಾಸಕ್ಕಾ ಹಾಡಿಗೆ ಮೆಟ್ರೋದಲ್ಲಿ ಯುವತಿಯ ಸಖತ್ ಡ್ಯಾನ್ಸ್... ವಿಡಿಯೋ - ಮೆಟ್ರೋ ನಿಲ್ದಾಣದಲ್ಲಿ ಯುವತಿ ಡ್ಯಾನ್ಸ್
ದೆಹಲಿ ಮೆಟ್ರೋದಲ್ಲಿ ಯುವತಿಯೊಬ್ಬರು ಯುವಕನಿಗೆ ಹಲವು ಬಾರಿ ಕಪಾಳಮೋಕ್ಷ ಮಾಡಿರುವ ಘಟನೆ ಕಳೆದ ಕೆಲ ದಿನಗಳ ಹಿಂದೆ ನಡೆದಿತ್ತು. ಇದೀಗ ಹೈದರಾಬಾದ್ ಮೆಟ್ರೋ ಸ್ಟೇಷನ್ನಲ್ಲಿ ಯುವತಿಯೊಬ್ಬರು ವಿಕ್ರಾಂತ್ ರೋಣ ಚಿತ್ರದ ಸಾಂಗ್ಗೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದಲ್ಲಿನ ಯಕ್ಕಸಕ್ಕಾ... ಯಕ್ಕಾಸಕ್ಕಾ ಹಾಡಿಗೆ ಸಖತ್ ಆಗಿ ಸೊಂಟ ಬಳುಕಿಸಿದ್ದಾರೆ. ಅವರ ವಿಡಿಯೋ ಸದ್ಯ ಸಿಕ್ಕಾಪಟ್ಟೆ ವೈರಲ್ ಅಗಿದೆ. ಈ ವಿಡಿಯೋ ನೋಡಿರುವ ನೆಟಿಜನ್ಸ್ ಶ್ಲಾಘನೆ ವ್ಯಕ್ತಪಡಿಸಿದ್ದರು. ಆದರೆ, ಮತ್ತೆ ಕೆಲವರು ಯುವತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ.