PPE ಕಿಟ್ನಲ್ಲಿ ಬಂದು ವೋಟ್ ಮಾಡಿದ ಸೀತಾರಾಮನ್, ಆರ್ಕೆ ಸಿಂಗ್! - ಕೇಂದ್ರ ಹಣಕಾಸು ಸಚಿವೆ ಸೀತಾರಾಮನ್
ನೂತನ ರಾಷ್ಟ್ರಪತಿ ಚುನಾವಣೆಗೋಸ್ಕರ ಇಂದು ಮತದಾನವಾಗಿದೆ. ಬಹುತೇಕ ಎಲ್ಲ ಸಂಸದರು, ಶಾಸಕರು ವೋಟ್ ಮಾಡಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ವಿದ್ಯುತ್ ಸಚಿವ ಆರ್.ಕೆ. ಸಿಂಗ್ ಪಿಪಿಇ ಕಿಟ್ ಹಾಕಿಕೊಂಡು ಬಂದು ಮತದಾನ ಮಾಡಿದ್ದಾರೆ. ಕೋವಿಡ್ ಸೋಂಕಿಗೊಳಗಾಗಿರುವ ಕಾರಣ ಈ ರೀತಿಯಾಗಿ ಆಗಮಿಸಿ ಅವರು ತಮ್ಮ ಮತದಾನ ಮಾಡಿದ್ದಾರೆ. ಇನ್ನೂ ಅನಾರೋಗ್ಯದ ಕಾರಣ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವ್ಹೀಲ್ ಚೇರ್ನಲ್ಲಿ ಬಂದು ತಮ್ಮ ಹಕ್ಕು ಚಲಾಯಿಸಿದರು.