ಕರ್ನಾಟಕ

karnataka

ETV Bharat / videos

ಕೈ ತಪ್ಪಿದ ಏಷ್ಯಾಕಪ್: ಡ್ಯಾಶಿಂಗ್​ ಬ್ಯಾಟರ್ ಇಶಾನ್ ಕಿಶನ್​ ಹೇಳಿದ್ದೇನು? - ಈಟಿವಿ ಭಾರತ ಕರ್ನಾಟಕ

By

Published : Aug 12, 2022, 5:13 PM IST

ಪಾಟ್ನಾ(ಬಿಹಾರ): ಮಹತ್ವದ ಏಷ್ಯಾಕಪ್​ ಟೂರ್ನಿಗೋಸ್ಕರ ಟೀಂ ಇಂಡಿಯಾ ಪ್ರಕಟಗೊಂಡಿದ್ದು, ತಂಡದಲ್ಲಿ ವಿರಾಟ್​ ಕೊಹ್ಲಿ, ದಿನೇಶ್ ಕಾರ್ತಿಕ್ ಸೇರಿ ಕೆಲ ಹಿರಿಯ ಪ್ಲೇಯರ್ಸ್​ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ಯಂಗ್​ ಡ್ಯಾಶಿಂಗ್​ ಬ್ಯಾಟರ್​ ಇಶಾನ್ ಕಿಶನ್​​ಗೆ ಅವಕಾಶ ದೊರೆತಿಲ್ಲ. ಈ ವಿಚಾರವಾಗಿ ಕಳೆದ ಕೆಲ ದಿನಗಳ ಹಿಂದೆ ಇನ್​​​ಸ್ಟಾಗ್ರಾಮ್​​ ಮೂಲಕ ನೋವು ಹೊರಹಾಕಿದ್ದ ಈ ಪ್ಲೇಯರ್​ ಇದೀಗ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ತಂಡಕ್ಕಾಗಿ ಆಟಗಾರರನ್ನು ಆಯ್ಕೆ ಮಾಡುವ ಮುನ್ನ ಆಯ್ಕೆದಾರರು ಬಹಳಷ್ಟು ವಿಚಾರ ಮಾಡುತ್ತಾರೆ. ನಾನು ಆಯ್ಕೆಯಾಗದಿರುವ ಬಗ್ಗೆ ಯಾವುದೇ ಬೇಸರವಿಲ್ಲ. ಇದು ನನಗೆ ಧನಾತ್ಮಕ ವಿಷಯ. ಮತ್ತಷ್ಟು ಕೆಲಸ ಮಾಡಿ, ಆಯ್ಕೆಗಾರರ ವಿಶ್ವಾಸ ಗೆಲ್ಲುತ್ತೇನೆ ಎಂದಿದ್ದಾರೆ.

ABOUT THE AUTHOR

...view details