ಕರ್ನಾಟಕ

karnataka

ETV Bharat / videos

2ನೇ ದಿನಕ್ಕೆ ಕಾಲಿಟ್ಟ ಕಾಂಗ್ರೆಸ್‌ ಭಾರತ್‌ ಜೋಡೋ ಯಾತ್ರೆ, ಡ್ರೋಣ್‌ ದೃಶ್ಯ - ಈಟಿವಿ ಭಾರತ ಕರ್ನಾಟಕ

By

Published : Sep 8, 2022, 9:41 AM IST

ತಮಿಳುನಾಡು: ಕಾಂಗ್ರೆಸ್‌ ಪಕ್ಷದ ಭಾರತ್ ಜೋಡೋ ಯಾತ್ರೆ ಇಂದು 2ನೇ ದಿನಕ್ಕೆ ಕಾಲಿಟ್ಟಿದೆ. ಸಂಸತ್‌ ಸದಸ್ಯ ರಾಹುಲ್ ಗಾಂಧಿ ಪಕ್ಷದ ಹಿರಿಯ ನಾಯಕರೊಂದಿಗೆ ತಮಿಳುನಾಡಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಛತ್ತೀಸ್‌ಗಢ ಸಿಎಂ ಭೂಪೇಶ್ ಬಾಘೆಲ್, ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ, ಜೈರಾಂ ರಮೇಶ್ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಮುಖಂಡ ಜೈರಾಂ ರಮೇಶ್, "ಬಿಜೆಪಿಯ ವಿಭಜನಕಾರಿ ರಾಜಕೀಯದ ವಿರುದ್ಧ ಹೋರಾಡುವುದು, ಆರ್ಥಿಕ ಅಸಮಾನತೆ, ಸಾಮಾಜಿಕ ಧ್ರುವೀಕರಣ ಹಾಗು ರಾಜಕೀಯ ಕೇಂದ್ರೀಕರಣಗಳಿಂದ ದೇಶಕ್ಕೆ ಉಂಟಾಗುವ ಅಪಾಯಗಳ ಬಗ್ಗೆ ಜನರನ್ನು ಎಚ್ಚರಿಸುವುದು ಈ ಯಾತ್ರೆಯ ಉದ್ದೇಶ" ಎಂದರು. ಕನ್ಯಾಕುಮಾರಿಯ ಅಗಸ್ತೀಶ್ವರಂನಲ್ಲಿ ಸಾಗುತ್ತಿದ್ದ ಈ ಯಾತ್ರೆ ಡ್ರೋಣ್‌ ದೃಶ್ಯಾವಳಿ ಇಲ್ಲಿದೆ ನೋಡಿ.

ABOUT THE AUTHOR

...view details