ಕರ್ನಾಟಕ

karnataka

By

Published : Jul 20, 2022, 10:33 AM IST

ETV Bharat / videos

ಪ್ರಜ್ವಲ್ 'ಮಾಫಿಯಾ' ಅಡ್ಡಕ್ಕೆ ಭೇಟಿ ಕೊಟ್ಟ ಸೆಂಚುರಿ ಸ್ಟಾರ್ ಶಿವಣ್ಣ

ಪ್ರಜ್ವಲ್ ದೇವರಾಜ್ ಅಭಿನಯದ '‌ಮಾಫಿಯಾ' ಸಿನಿಮಾ ಶೂಟಿಂಗ್ ಸ್ಪಾಟ್​ಗೆ ನಟ ಶಿವರಾಜ್ ಕುಮಾರ್ ಭೇಟಿ ನೀಡಿ ಅಚ್ಚರಿ ಮೂಡಿಸಿದರು. ಶಿವಣ್ಣನನ್ನು ನೋಡಿದ ಪ್ರಜ್ವಲ್ ಓಡಿ ಬಂದು ಅಪ್ಪಿಕೊಂಡರು. ಬಳಿಕ ನಿರ್ದೇಶಕ ಲೋಹಿತ್ ಜೊತೆ ಸ್ವಲ್ಪ ಸಮಯ ಕಳೆದ ಅವರು ಸಿನಿಮಾ ಬಗ್ಗೆ ಚರ್ಚಿಸಿದರು. ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾದ ಚಿತ್ರೀಕರಣ ಈ ತಿಂಗಳಾಂತ್ಯಕ್ಕೆ ಮುಕ್ತಾಯವಾಗಲಿದೆ. ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಪ್ರಜ್ವಲ್​ಗೆ ನಾಯಕಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದು, ಶೈನ್ ಶೆಟ್ಟಿ, ದೇವರಾಜ್, ವಿಜಯ್ ಚೆಂಡೂರ್, ವಾಸುಕಿ ವೈಭವ್, ಸಾಧುಕೋಕಿಲ ಮುಂತಾದವರು ಬಣ್ಣಹಚ್ಚಿದ್ದಾರೆ.

ABOUT THE AUTHOR

...view details