ನೋಡಿ: ಗಾಳಕ್ಕೆ ಬಿತ್ತು ಬೃಹತ್ ಗಾತ್ರದ ಕುರುಡೆ ಮೀನು! - ಕಾಳಿ ನದಿಯಲ್ಲಿ ಮೀನಿನ ಬೇಟೆ
ಕಾರವಾರ: ನಗರದ ಕೋಡಿಭಾಗದಲ್ಲಿರುವ ಕಾಳಿ ನದಿಯಲ್ಲಿ ತಂಡವೊಂದು ಗಾಳ ಹಾಕಿದ ಸಂದರ್ಭ 20 ಕೆಜಿಗೂ ಅಧಿಕ ತೂಕದ ಮೀನು ಸಿಕ್ಕಿದೆ. ಕುರುಡೆ ಎನ್ನುವ ಜಾತಿಯ ಮೀನು ಇದಾಗಿದೆ. ಅಪರೂಪವಂಬಂತೆ ಗಾಳಕ್ಕೆ ಇಷ್ಟೊಂದು ದೊಡ್ಡ ಗಾತ್ರ ಮೀನು ಬಿದ್ದಿರುವುದು ಜನರಿಗೆ ಅಚ್ಚರಿಯೊಂದಿಗೆ ಸಂತೋಷ ತಂದಿದೆ. ಮೀನನ್ನು ನದಿಯಿಂದ ಮೇಲೆತ್ತಲು ಗಾಳ ಹಾಕಿದವರು ಹರಸಾಹಸಪಟ್ಟರು.