ಅಪಘಾತವಾದ ಸ್ಥಳಕ್ಕೆ ಬಾರದ ಆಂಬ್ಯುಲೆನ್ಸ್... ಗಾಯಾಳುವಿಗೆ JCBಯಲ್ಲಿ ಆಸ್ಪತ್ರೆಗೆ ಕರೆದೊಯ್ದ ಸ್ಥಳೀಯರು! - ಈಟಿವಿ ಭಾರತ ಕರ್ನಾಟಕ
ಭೋಪಾಲ್(ಮಧ್ಯಪ್ರದೇಶ): ಅಪಘಾತ ನಡೆದ ಸ್ಥಳಕ್ಕೆ ಆಂಬ್ಯುಲೆನ್ಸ್ ಬರಲು ತಡವಾದ ಕಾರಣಕ್ಕಾಗಿ ಗಾಯಾಳುವಿಗೆ ಜೆಸಿಬಿಯಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ಘಟನೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಬರಾಹಿ ಪ್ರದೇಶದಲ್ಲಿ ನಡೆದಿದೆ. ರಸ್ತೆ ಅಪಘಾತದಲ್ಲಿ ಮಹೇಶ್ ಬರ್ಮನ್ ಎಂಬಾತ ಗಾಯಗೊಂಡಿದ್ದನು. ಈ ವೇಳೆ ಆಂಬ್ಯುಲೆನ್ಸ್ಗೆ ಫೋನ್ ಮಾಡಲಾಗಿದೆ. ಆದರೆ, ಸಮಯಕ್ಕೆ ಸರಿಯಾಗಿ ಬಾರದ ಕಾರಣ ತಕ್ಷಣವೇ ಗಾಯಾಳುವನ್ನ ಜೆಸಿಬಿಯ ಮುಂಭಾಗದಲ್ಲಿ ಹಾಕಿಕೊಂಡು ಕರೆದೊಯ್ಯಲಾಗಿದೆ. ಅದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ ತಿಂಗಳ ಸಹ ಗರ್ಭಿಣಿಯೋರ್ವರನ್ನ ಜೆಸಿಬಿ ಮೂಲಕ ಆಸ್ಪತ್ರೆಗೆ ಕರೆದೊಯ್ದ ಘಟನೆ ನೀಮುಚ್ನಲ್ಲಿ ನಡೆದಿತ್ತು.