ಬೈಕ್ನಲ್ಲಿ ನಾಗರಹಾವು ಪತ್ತೆ.. ಒಂದೂವರೆ ಕಿಮೀ ದೂರದ ಗ್ಯಾರೇಜ್ಗೆ ಸಾಗಿಸಿ ಹಾವು ರಕ್ಷಣೆ - ಬೈಕ್ನಲ್ಲಿ ನಾಗರಹಾವು ಪತ್ತೆ
ತುಮಕೂರು: ಬೈಕ್ನಲ್ಲಿ ನಾಗರಹಾವು ಇದ್ದರೂ ಒಂದೂವರೆ ಕಿಲೋ ಮೀಟರ್ ದೂರ ಸಾಗಿಸಿದ ಬಳಿಕ ಹಾವು ರಕ್ಷಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ರಂಗಾಪುರ ಬಡಾವಣೆಯಲ್ಲಿ ಶರತ್ ಎಂಬುವರ ಬೈಕ್ನಲ್ಲಿ ನಾಗರಹಾವು ಸೇರಿಕೊಂಡಿತ್ತು. ಹಾವು ಇರುವಿಕೆಯನ್ನು ಕಂಡು ಭಯಭೀತರಾದ ಶರತ್, ವರಂಗಲ್ ವನ್ಯಜೀವಿ ಜಾಗೃತ ಹಾಗೂ ಉರಗ ರಕ್ಷಣೆ ಸಂಸ್ಥೆಗೆ ಕರೆ ಮಾಡಿದರು. ಉರಗ ತಜ್ಞ ದಿಲೀಪ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡಿ ನಂತರ ಬೈಕ್ ಅನ್ನು ಒಂದು ಕಿಲೋಮೀಟರ್ ದೂರದಲ್ಲಿರುವ ಗ್ಯಾರೇಜ್ಗೆ ಕೊಂಡೊಯ್ದುರು. ಬೈಕ್ ಪಾರ್ಟ್ಸ್ ಗಳನ್ನು ಬಿಚ್ಚಿ ಅರ್ಧಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ಸೇರಿಕೊಂಡಿದ್ದ ಹಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿ ದೇವರಾಯನ ದುರ್ಗ ಅರಣ್ಯಕ್ಕೆ ಬಿಟ್ಟರು.