ಸಾಲುಮರಗಳ ನಡುವೆ ಜಿಪ್ಲೈನ್ ಸಾಹಸ.. ಈ ರೋಮಾಂಚನಕಾರಿ ಕ್ರೀಡೆಗೆ ಮನಸೋಲದವರೇ ಇಲ್ಲ..
ಗದಗ : ಸುತ್ತಲೂ ಹಚ್ಚ ಹಸಿರಿನ ಬೆಟ್ಟ ಗುಡ್ಡ, ಈ ಹಸಿರ ಸೊಬಗಿನ ನಡುವೆ ಆ ಬದಿಯಿಂದ ಈ ಬದಿಯವರೆಗೆ ಎತ್ತರಕ್ಕೆ ಹಾಕಿರುವ ಉದ್ದನೆಯ ತಂತಿ. ತಂತಿಯ ಮೇಲೆ ಇಲ್ಲಿಂದ ಅಲ್ಲಿಗೆ ಜಾರಿಕೊಂಡು ಹೋಗುತ್ತಿರುವ ಜನ. ನಿಂತು ನೋಡಿ ಖುಷಿ ಪಡುತ್ತಿರುವವರು ಒಂದಿಷ್ಟು ಮಂದಿ. ಇದು ಗದಗ ತಾಲೂಕಿನ ಬಿಂಕದಕಟ್ಟಿಯ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ನೂತನವಾಗಿ ಅಳವಡಿಸಿರುವ ಜಿಪ್ಲೈನ್ ಕ್ರೀಡೆಯ ಒಂದು ಝಲಕ್..