ಯಲ್ಲಾಪುರ ಜನರ ಮಾದರಿ ಕೆಲಸ ಏನು ಅಂತ ನೀವೇ ನೋಡಿ... - yellapura people are role model to others
ಶಿರಸಿ: ಮಳೆಯಿಂದ ಗುಂಡಿಗಳಾದ ರಸ್ತೆ ಸರಿಪಡಿಸಿ ಎಂದು ಪ್ರತಿಭಟನೆಗೆ ಬಂದ ಗ್ರಾಮಸ್ಥರೇ ತಮ್ಮೂರಿನ ರಸ್ತೆ ಸರಿಪಡಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಉದ್ಯಮ ನಗರದಲ್ಲಿ ನಡೆದಿದೆ. ಅಧಿಕ ಮಳೆಯಿಂದ ಉದ್ಯಮ ನಗರದ ಯಲ್ಲಾಪುರ ತಟಗಾರ ರಸ್ತೆ ಸಂಪೂರ್ಣ ಹಾನಿಯಾಗಿ ಗುಂಡಿಗಳಾಗಿ ಮಾರ್ಪಟ್ಟಿತ್ತು. ರಸ್ತೆ ದುರಸ್ಥಿಗೆ ಲೋಕೋಪಯೋಗಿ ಇಲಾಖೆಯಿಂದ ಹಣ ಕೂಡ ಮಂಜೂರಾಗಿತ್ತು. ಆದರೆ ಮಳೆ ನೆಪ ಹೇಳಿ ಅಧಿಕಾರಿಗಳು ರಸ್ತೆ ಸರಿಪಡಿಸಿರಲಿಲ್ಲ. ಹೀಗಾಗಿ ಈ ಊರಿನ ಜನ ಹಲವು ಬಾರಿ ಮನವಿ ಮಾಡಿದ್ದರು. ಆದರೆ ಅಧಿಕಾರಿಗಳು ಮಾತ್ರ ಸ್ಪಂದಿಸಿರಲಿಲ್ಲ. ಹೀಗಾಗಿ ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ಪ್ರತಿಭಟನೆಗೆ ಮುಂದಾಗಿದ್ದ ಗ್ರಾಮಸ್ಥರೇ ರಸ್ತೆಯಲ್ಲಿನ ಗುಂಡಿ ಮುಚ್ಚಿದ್ದಾರೆ.