ಬೇಲೂರಲ್ಲಿ ಮೊಸರಿನ ಗಡಿಗೆ ಒಡೆದು ಶ್ರೀಕೃಷ್ಣಜನ್ಮಾಷ್ಟಮಿ.. ಭಕ್ತರ ಹರ್ಷೋದ್ಘಾರ
ಹಾಸನ ಜಿಲ್ಲೆಯ ಬೇಲೂರು ಚನ್ನಕೇಶವ ದೇವಾಲಯದಲ್ಲಿ ಯಾದವ ಸಂಘದಿಂದ ಅದ್ಧೂರಿ ಮೊಸರಿನ ಗಡಿಗೆ ಉತ್ಸವ ಜರುಗಿತು. ಕೃಷ್ಣಜನ್ಮಾಷ್ಟಮಿ ಅಂಗವಾಗಿ ನೆರೆದಿದ್ದ ಸಹಸ್ರಾರು ಜನರಲ್ಲಿ ಕೃಷ್ಣೋತ್ಸವದ ಸಂಭ್ರಮ ಮನೆ ಮಾಡಿತ್ತು. ಉತ್ಸವಕ್ಕೆ ಮಧ್ಯರಾತ್ರಿ ತನಕ ಬೇಲೂರು ಸೇರಿದಂತೆ ವಿವಿಧೆಡೆಯಿಂದ ಸಹಸ್ರಾರು ಜನರು ಆಗಮಿಸಿದ್ದರು. ಈ ವೇಳೆ ಭಕ್ತರ ಹರ್ಷೋದ್ಘಾರವೂ ಮುಗಿಲು ಮುಟ್ಟಿತ್ತು. ಭಾರಿ ಪ್ರಮಾಣದಲ್ಲಿ ಪಟಾಕಿಗಳನ್ನು ಸಿಡಿಸಲಾಯಿತು. ಎರಡು ದಿನಗಳ ಕಾಲ ನೆರವೇರಿದ ಕೃಷ್ಣೋತ್ಸವಕ್ಕೆ ತೆರೆ ಎಳೆಯಲಾಯಿತು.
Last Updated : Aug 27, 2019, 3:14 PM IST