ವಿಶ್ವ ಸ್ವಚ್ಛತಾ ದಿನಾಚರಣೆ: ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸುತ್ತ ಸ್ವಚ್ಛತಾ ಕಾರ್ಯ - ವಿಶ್ವ ಸ್ವಚ್ಛತಾ ದಿನಾಚರಣೆ
ಆನೇಕಲ್: ವಿಶ್ವ ಸ್ವಚ್ಛತಾ ದಿನಾಚರಣೆ ಅಂಗವಾಗಿ ಕಾನೂನು ನಿಮ್ಮದು, ನೆರವು ನಮ್ಮದು ಎನ್ನುವ ಕಾನೂನು ಅರಿವು ಕಾರ್ಯಕ್ರಮ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ, ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆಡಳಿತ ಮಂಡಳಿ, ಸ್ಥಳೀಯ ಪಂಚಾಯಿತಿ, ತಾಲೂಕು ಆಡಳಿತ, ಸ್ವಯಂ ಸೇವಕರು ಸೇರಿದಂತೆ ಕಾಲೇಜು ವಿದ್ಯಾರ್ಥಿಗಳ ಭಾಗಿಯಾಗಿ ಪ್ರವಾಸಿ ತಾಣ ಬನ್ನೇರುಘಟ್ಟ ಉದ್ಯಾನವನದ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿದರು.