ಮೆಹಿಂದಿ ವೇಳೆ ಮದ್ಯವಿಲ್ಲ, ಊರೆಲ್ಲಾ ಹುಡುಕಿದ್ರೂ ತಂಬಾಕು ಸಿಗಲ್ಲ! ಗ್ರಾಮಸ್ಥರ ನಿರ್ಧಾರಕ್ಕೆ ಮೆಚ್ಚುಗೆಯ ಮಹಾಪೂರ - ಮೆಹಂದಿ ಕಾರ್ಯಕ್ರಮ
ಸಾಮಾನ್ಯವಾಗಿ ಮದುವೆಯ ಸಂದರ್ಭದಲ್ಲಿ ಅದರಲ್ಲೂ ಮೆಹಂದಿ ಕಾರ್ಯಕ್ರಮಗಳಲ್ಲಿ ಯುವಜನತೆಯ ಮದ್ಯಪಾನದ ಚಟ ಆರಂಭವಾಗುವುದೆಂಬ ಮಾತುಗಳಿವೆ. ಆದರೆ ಇದಕ್ಕೆಲ್ಲಾ ಕಡಿವಾಣ ಹಾಕಲು 22 ವರ್ಷ ಹಿಂದೆಯೇ ಉಡುಪಿ ಜಿಲ್ಲೆಯ ಕೋಡಿಬೆಂಗ್ರೆ ಗ್ರಾಮಸ್ಥರೆಲ್ಲ ಒಟ್ಟಾಗಿ ಮಹತ್ವದ ನಿರ್ಣಯ ಕೈಗೊಂಡಿದ್ದಾರೆ. ವಿವಾಹ ಪೂರ್ವದ ಮೆಹಂದಿ ಕಾರ್ಯಕ್ರಮಕ್ಕೆ ಮದ್ಯ-ಮಾಂಸ ನಿಷೇಧಿಸುವ ಜತೆಗೆ ತಂಬಾಕು ಮುಕ್ತ ಪ್ರದೇಶವನ್ನಾಗಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.