ಸುಪ್ರೀಂ ಇಂದು ನೀಡಿದ ಆದೇಶವೇನು? ನಾಳಿನ ವಿಚಾರಣೆಯಲ್ಲಿ ಏನೆಲ್ಲ ಆಗಬಹುದು!? - ಸುಪ್ರೀಂ, ಇಂದು ನೀಡಿದ,ಆದೇಶವೇನು,ನಾಳಿನ ವಿಚಾರಣೆಯಲ್ಲಿ, ಏನೆಲ್ಲ ಆಗಬಹುದು
ರಾಜ್ಯ ರಾಜಕಾರಣ ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಯಾವಾಗ ಏನು ಬೆಳವಣಿಗೆಗಳಾಗುತ್ತೋ ಅಂತಾ ನಾಯಕರಲ್ಲಿ ಆತಂಕ ಹುಟ್ಟಿಸಿದೆ. ಇದೀಗ ಅತೃಪ್ತರ ಮುನಿಸು ಸುಪ್ರೀಂ ಅಂಗಳ ತಲುಪಿದೆ. ಅತೃಪ್ತ ಶಾಸಕರು ರಾಜೀನಾಮೆ ನೀಡಿ ವಾರ ಸಮೀಪಿಸುತ್ತಿದ್ದರೂ ಸ್ಪೀಕರ್ ರಮೇಶ್ ಕುಮಾರ್ ರಾಜೀನಾಮೆ ಅಂಗೀಕಾರ ಮಾಡಿರಲಿಲ್ಲ. ರಾಜೀನಾಮೆ ಕೊಟ್ಟ ಮೂರು ದಿನಗಳ ಬಳಿಕ ರಾಜೀನಾಮೆ ಪತ್ರವನ್ನು ಕೈಗೆತ್ತಿಕೊಂಡ ಸ್ಪೀಕರ್, ಕೇವಲ ಐದು ಶಾಸಕರ ರಾಜೀನಾಮೆ ಕ್ರಮಬದ್ಧ, ಇನ್ನುಳಿದ ಶಾಸಕರು ಮತ್ತೆ ಕ್ರಮಬದ್ಧವಾಗಿ ರಾಜೀನಾಮೆ ಪತ್ರ ಸಲ್ಲಿಸಬೇಕೆಂಬ ಸಂದೇಶ ರವಾನಿಸಿದ್ರು. ಸ್ಪೀಕರ್ ಈ ನಿರ್ಧಾರದಿಂದ ದೋಸ್ತಿ ನಾಯಕರಿಗೆ ಕೊಂಚ ಕಾಲಾವಕಾಶ ಸಿಕ್ಕಂತಾಗಿತ್ತು.