ಆರ್ಆರ್ ನಗರ ಉಪಚುನಾವಣೆ:ಲಗ್ಗೆರೆ ವಾರ್ಡ್ನಲ್ಲಿ ಮತದಾರರಿಗೆ ಗೊಂದಲ - voters Confusion in Laggere Ward
ಮತದಾರರಿಗೆ ಮತಗಟ್ಟೆಯ ಗೊಂದಲ ಸೃಷ್ಟಿಯಾಗಿರುವ ಘಟನೆ ಲಗ್ಗೆರೆ ಸರ್ಕಾರಿ ಸ್ಕೂಲ್ ಬಳಿ ನಡೆದಿದೆ. ಯಾವ ಬೂತ್ ಎಂದು ಗೊತ್ತೇ ಆಗುತ್ತಿಲ್ಲ ಎಂಬ ಮಾತುಗಳು ಮತದಾರರ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೋ ನಂಬರ್ ಬರೆದು ಕೊಡುತ್ತಾರೆ. ನಮಗೆ ಕಚೇರಿಗೆ ತಡವಾಯಿತು. ಮತ ಹಾಕೋ ಬದಲು ಆಫೀಸ್ಗೆ ಹೋಗೋದೆ ಒಳ್ಳೆದು ಎಂದು ನಾಲ್ಕು ಕಡೆ ಬೂತ್ಗೆ ಹೋಗಿ ವಾಪಸ್ ಬಂದ ಮತದಾರ ಹರಿಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.