ಗಣೇಶನ ಹಬ್ಬದ ಮೇಲೆ ಬರದ ಎಫೆಕ್ಟ್..ಗಣಪನ ಮೂರ್ತಿಗಳ ನಿಮಜ್ಜನಕ್ಕೂ ಇಲ್ಲ ನೀರು
ರಾಜ್ಯದ ಬಹುತೇಕ ಭಾಗ ಪ್ರವಾಹಕ್ಕೆ ತುತ್ತಾಗಿದೆ. ಅಲ್ಲೆಲ್ಲಾ ವಿಘ್ನ ವಿನಾಯಕನಿಗೆ ಪ್ರಾರ್ಥಿಸುವುದು ಬಿಟ್ರೆ ಹಬ್ಬದ ಸಂಭ್ರಮವಿಲ್ಲ. ಇತ್ತ ಬಯಲು ಸೀಮೆಯಲ್ಲಿ ಹಬ್ಬ ಆಚರಿಸಲು ಮುಂದಾದವರಿಗೆ ಮತ್ತೊಂದು ವಿಘ್ನ ಎದುರುರಾಗಿದೆ. ಗಣೇಶನ ಮೂರ್ತಿಗಳನ್ನು ಬಿಡಲು ನೀರಿಲ್ಲದೆ ಕೋಲಾರದ ಜನ ಪರದಾಡುವಂತಾಗಿದೆ. ಕೋಲಾರ ಬಾರದ ಶಾಪಕ್ಕೆ ತುತ್ತಾಗಿರುವ ಜಿಲ್ಲೆ. ನೀರಲ್ಲದೆ ಭೂಮಿ ಬಾಯ್ಬಿಟ್ಟಿದೆ. ಜಾನುವಾರುಗಳಿಗೆ ನೀರು ಒದಗಿಸಲಾಗದೆ ರೈತರು ಹೈರಾಣಾಗಿದ್ದಾರೆ. ಈ ಬಾರಿ ಗಣೇಶನ ಹಬ್ಬದ ಮೇಲೂ ಬರ ನೆರಳು ಬಿದ್ದಿದೆ.