ತಂದೆ-ತಾಯಿ ಇಟ್ಟ ಭರವಸೆ ಹುಸಿಗೊಳಿಸದ ಹಳ್ಳಿ ಹೈದ... ಪಿಯುಸಿಯಲ್ಲಿ ಉತ್ತಮ ಸಾಧನೆ!
ರಾಯಚೂರು: ಇಂತಿಷ್ಟು ಸಮಯ ಮೀಸಲಿಟ್ಟು ಅಭ್ಯಾಸ ಮಾಡುವ ಜೊತೆಗೆ ತಂದೆ-ತಾಯಿ ಇಟ್ಟ ಭರವಸೆ ಹುಸಿಗೊಳಿಸಬಾರದು ಎಂಬ ಉದ್ದೇಶದಿಂದ ಸಾಗಿದ ಹಳ್ಳಿ ಹೈದನೊಬ್ಬ ಪಿಯುಸಿ ಪರೀಕ್ಷೆಯಲ್ಲಿ ಬರೋಬ್ಬರಿ (552) ಶೇ. 92 ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾನೆ. ರಾಯಚೂರು ತಾಲೂಕಿನ ಎಲೆಬಿಚ್ಚಾಲಿ ಗ್ರಾಮದ ಗಿಡ್ಡಯ್ಯ ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಅಭ್ಯಾಸ ಮಾಡಿ ಈ ಸಾಧನೆ ಮಾಡಿದ್ದಾನೆ.