ಮಾಂಸ ಕೊಳ್ಳುವವರಿಲ್ಲದೆ ಬಿಕೋ ಎನ್ನುತ್ತಿವೆ ಮಟನ್ ಅಂಗಡಿಗಳು
ಮುಸ್ಲಿಂರ ಪವಿತ್ರ ರಂಜಾನ್ ಹಬ್ಬದ ಆಚರಣೆಗೆ ಲಾಕ್‌ಡೌನ್ ಎಫೆಕ್ಟ್ ತಟ್ಟಿದೆ. ನಗರದ ಮಾಂಸ ಮಾರುಕಟ್ಟೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಗ್ರಾಹಕರಿಲ್ಲದೇ ಮಾಂಸ ಮಳಿಗೆಗಳು ಬಿಕೋ ಎನ್ನುತ್ತಿವೆ. ಹೌದು, ಮಡಿಕೇರಿ ನಗರದ ಎಪಿಎಂಸಿ ಸಮೀಪದ ಮಾಂಸ ಮಾರುಕಟ್ಟೆಯಲ್ಲಿ ಬೆಳಗ್ಗೆಯಿಂದಲೇ ವ್ಯಾಪಾರಸ್ಥರು ಮಾಂಸದ ಅಂಗಡಿಗಳನ್ನು ತೆರೆದಿದ್ದರೂ ಸಹ ಗ್ರಾಹಕರು ಮಾತ್ರ ಬಂದಿಲ್ಲ. ಬೆರಳೆಣಿಕೆಯಷ್ಟು ಗ್ರಾಹಕರು ಕಾಣಿಸುತ್ತಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ ಕೊಟ್ಟಿಲ್ಲ. ಆದ್ರೆ, ಪ್ರತಿ ವರ್ಷದಂತೆ ಮಾಂಸ ಮಾರಾಟವಾಗದೇ ವ್ಯಾಪಾರಿಗಳು ಕೈಚೆಲ್ಲಿ ಕುಳಿತಿದ್ದಾರೆ. ಈ ಕುರಿತು ಪ್ರತ್ಯಕ್ಷ ವರದಿ ಇಲ್ಲಿದೆ.