ಕಾರವಾರದಲ್ಲಿ ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ: ಕತ್ತಲೆ ಕೋಣೆಯಲ್ಲಿಡುತ್ತಿರುವ ಆರೋಪ!
ಕಾರವಾರ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಜೋರಾಗಿದೆ. ಸಂಜೆಯಾಗುತ್ತಿದ್ದಂತೆ ಒಂಟಿಯಾಗಿ ಓಡಾಡುವ ಇಲ್ಲವೇ ವಾಹನವೇರಿ ಬರುವವರ ಮೇಲೆ ದಾಳಿ ಮಾಡುತ್ತಿದ್ದು, ಇಂತಹ ನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರ ಚಿಕಿತ್ಸೆ ಮೂಲಕ ಜನ ಸಾಮಾನ್ಯರಿಗಾಗುತ್ತಿರುವ ಕಾಟ ತಪ್ಪಿಸಲು ನಗರಸಭೆ ಮುಂದಾಗಿದೆ. ಆದರೆ, ಹೀಗೆ ಚಿಕಿತ್ಸೆಗೊಳಪಡಿಸಿದ ನಾಯಿಗಳನ್ನು ಗಾಳಿ ಬೆಳಕು ಇಲ್ಲದ ಕೋಣೆಯಲ್ಲಿ ಕೂಡಿ ಹಾಕುತ್ತಿರುವ ಆರೋಪ ಕೇಳಿ ಬಂದಿದ್ದು, ಇದು ಸ್ಥಳೀಯ ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.