ಬೆಂಗಳೂರಿನಲ್ಲಿ ಬನಶಂಕರಿ ದೇವಿಗೆ ಹಬ್ಬದ ವಿಶೇಷ ಪೂಜೆ - ವರಮಹಾಲಕ್ಷ್ಮಿ ಹಬ್ಬ
ಬೆಂಗಳೂರು: ಕೊರೊನಾ ಮಹಾಮಾರಿ ಭೀತಿ ನಡುವೆಯೇ ಪವಿತ್ರ ವರಮಹಾಲಕ್ಷ್ಮಿ ಹಬ್ಬ ಬಂದಿದೆ. ಮನೆಮಂದಿಯೆಲ್ಲ ಮನೆಯಲ್ಲೇ ಕಲಶಲಕ್ಷ್ಮಿ ಪ್ರತಿಷ್ಠಾಪಿಸಿ ಶ್ರದ್ಧಾ, ಭಕ್ತಿಯಿಂದ ಪೂಜೆ ನಡೆಸುತ್ತಿದ್ದಾರೆ. ಮನೆ ಮುಂದೆ ರಂಗೋಲಿ ಹಾಕಿ, ತೋರಣ ಕಟ್ಟಿ ಸಂಭ್ರಮಿಸುತ್ತಿದ್ದಾರೆ. ಇಂದು ನಗರದ ದೇವೀ ದೇವಾಲಯಗಳಲ್ಲೂ ವಿಶೇಷ ಪೂಜೆಗಳು ನಡೆದಿವೆ. ಪ್ರಸಿದ್ಧ ಬನಶಂಕರಿ ದೇವಿಯ ದೇವಾಲಯದಲ್ಲೂ ವಿಶೇಷ ಪೂಜೆ, ಅರ್ಚನೆ ನಡೆಯುತ್ತಿದೆ. ಆದರೆ, ಕೊರೊನಾ ಹಿನ್ನೆಲೆ ಭಕ್ತರ ಸಂಖ್ಯೆ ವಿರಳವಾಗಿದೆ. ಕೊರೊನಾ ಭಯದಿಂದಾಗಿ ಭಕ್ತರು ಮನೆಬಿಟ್ಟು ಹೊರಬರುತ್ತಿಲ್ಲ. ಮನೆಯಲ್ಲಿಯೇ ಪೂಜೆ ನಡೆಸುತ್ತಿದ್ದಾರೆ. ದೇವಿಗೆ ಹೊಸ ಸೀರೆಯಿಂದ, ಹೂವುಗಳಿಂದ ಅಲಂಕರಿಸಿ, ಹಣ್ಣು, ಹಂಪಲುಗಳು, ನೈವೇದ್ಯಗಳನ್ನಿಟ್ಟು ವೃತ ಆಚರಿಸುತ್ತಿದ್ದಾರೆ. ಸಂಜೆ ವೇಳೆ ಮಹಿಳೆಯರು ಮನೆ ಮನೆಗೆ ಹೋಗಿ ಅರಶಿನ ಕುಂಕುಮ ಪಡೆಯುವ ಸಂಪ್ರದಾಯವಿದೆ. ನಗರದಲ್ಲೂ ಮಹಿಳೆಯರು ಸಂಭ್ರಮದಲ್ಲಿ ಹಬ್ಬ ಆಚರಣೆ ಮಾಡುತ್ತಾರೆ.