ಸಿಎಂ ಬಿಎಸ್ವೈ ಭೇಟಿಯಾದ ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ - bangalore news
ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸ ಧವಳಗಿರಿಗೆ ಭೇಟಿ ನೀಡಿದರು. ಬಿಎಸ್ವೈ ನಿವಾಸದಲ್ಲಿ ಸಚಿವ ಸಂಪುಟ ವಿಸ್ತರಣೆಯಿಂದ ಭುಗಿಲೆದ್ದ ಅಸಮಾಧಾನ ಶಮನಗೊಳಿಸಲು ಸಚಿವ ಸ್ಥಾನ ವಂಚಿತರನ್ನು ಮನೆಗೆ ಕರೆಸಿಕೊಂಡರು. ಆಕಾಂಕ್ಷಿಗಳ ಕ್ಷೇತ್ರಕ್ಕೆ ಹೆಚ್ಚಿನ ಅನುದಾನದ ಭರವಸೆ, ಹಲವು ಬೇಡಿಕೆಗಳ ಕುರಿತು ಶಾಸಕರೊಂದಗೆ ಸಿಎಂ ಈ ವೇಳೆ ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ.