ಪ್ರವೇಶ ನಿರ್ಬಂಧ ತೆರವು: ಭರಚುಕ್ಕಿಗೆ ಭರಪೂರ ಪ್ರವಾಸಿಗರು! - ಚಾಮರಾಜನಗರ ಸುದ್ದಿ
ಕೊಳ್ಳೇಗಾಲ (ಚಾಮರಾಜನಗರ): ತಾಲೂನ ಜನಪ್ರಿಯ ಭರಚುಕ್ಕಿ ಜಲಪಾತ ವೀಕ್ಷಣೆಗೆ ಜಿಲ್ಲಾಡಳಿತ ಭಾನುವಾರ ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆ, ವಿವಿಧೆಡೆಯಿಂದ ಪರಿಸರ ಪ್ರೇಮಿಗಳ ದಂಡು ಹರಿದು ಬಂದಿದೆ. ಕೋವಿಡ್ ಹಿನ್ನಲೆಯಲ್ಲಿ ಭರಚುಕ್ಕಿ ಜಲಪಾತ ಪ್ರದೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಬಳಿಕ ಸಚಿವ ಸುರೇಶಕುಮಾರ್ ಹಾಗೂ ಜಿಲ್ಲಾಧಿಕಾರಿ ಚರ್ಚಿಸಿ ಇಂದಿನಿಂದ ಅವಕಾಶ ನೀಡುವಂತೆ ಸೂಚನೆ ನೀಡಿದ್ದರು. ಪ್ರವೇಶಕ್ಕೆ ಅವಕಾಶ ಸಿಕ್ಕ ಮಾಹಿತಿ ತಿಳಿಯುತ್ತಿದಂತೆ ಪ್ರವಾಸಿಗರ ದಂಡೇ ಹರಿದುಬಂದಿದೆ.