ರಕ್ತದ ಕಣ ಕಣದಲ್ಲೂ ತಂಗಿ ಜೀವಂತ.. ಸೋದರಿ ಸ್ಮರಣೆಗೆ ಅಣ್ಣನಿಂದ 75 ಬಾರಿ ಬ್ಲಡ್ ಡೊನೇಟ್! - ಕಲಬುರಗಿ ರಕ್ತದಾನದ ಕುರಿತು ಜಾಗೃತಿ
ಕಲಬುರಗಿ: ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದಾಗ ಸಮಯಕ್ಕೆ ರಕ್ತ ಸಿಗದೆ ತಂಗಿ ಸಾವನ್ನಪ್ಪಿದ್ದನ್ನು ಕಣ್ಣಾರೆ ಕಂಡ ಸೋದರನೊಬ್ಬ ಆ ಸ್ಥಿತಿ ಇನ್ನೊಬ್ಬರಿಗೆ ಬಾರದಿರಲೆಂದು ಮೇಲಿಂದ ಮೇಲೆ ರಕ್ತದಾನ ಮಾಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಮಾಗಡಿ ಶಿವಕುಮಾರ್ ಎಂಬ ಈತ ದಾವಣಗೆರೆ ನಿವಾಸಿ. ರಾಜ್ಯದ ಹಲವೆಡೆ ಸಂಚರಿಸಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇಂದು ಕಲಬುರ್ಗಿ ಸಾಹಿತ್ಯ ಸಮ್ಮೇಳನದಲ್ಲಿ ರಕ್ತದಾನದ ಜಾಗೃತಿ ಮೂಡಿಸ್ತಿರೋ ಅವರ ಜತೆಗೆ ಈಟಿವಿ ಭಾರತ್ ಪ್ರತಿನಿಧಿ ಮಾತನಾಡಿಸಿದ್ದಾರೆ. ಅವರು ಏನ್ ಹೇಳಿದ್ದಾರೆ ಬನ್ನಿ ಕೇಳೋಣ..