ಕರ್ನಾಟಕ

karnataka

ETV Bharat / videos

ಶೂ ಧರಿಸಿ ದೇವಸ್ಥಾನ ಪ್ರವೇಶಿಸಿದ ಯುವಕ... ಪ್ರಶ್ನಿಸಿದ ಅರ್ಚಕನ ಮೇಲೆ ಹಲ್ಲೆ

By

Published : May 4, 2019, 8:12 PM IST

ಚಿಕ್ಕಬಳ್ಳಾಪುರ: ಏಕಾಏಕಿ ವ್ಯಕ್ತಿಯೋರ್ವ ದೇವಸ್ಥಾನದ ಒಳ ಪ್ರವೇಶಿಸಿ ಅರ್ಚಕನನ್ನು ಥಳಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ನಡೆದಿದೆ. ನಗರದ ಟಿಬಿ ರಸ್ತೆಯಲ್ಲಿರುವ ಕೃಷ್ಣಸ್ವಾಮಿ ದೇವಾಲಯದಲ್ಲಿ ಈ‌ ಘಟನೆ ನಡೆದಿದ್ದು, ಶೂ ಧರಿಸಿ ದೇವಾಸ್ಥಕ್ಕೆ ಎಂಟ್ರಿ ಕೊಟ್ಟ ಯುವಕನನ್ನು ಪ್ರಶ್ನಿಸಿದ್ದಕ್ಕೆ ಅರ್ಚಕನ ಮೇಲೆ ಯುವಕ ಹಲ್ಲೆ ನಡೆಸಿದ್ದಾನೆ. ಇನ್ನು ಅರ್ಚಕ ಒಳಗಿನಿಂದ ಕೂಗಾಡಿದ್ದರಿಂದ ಸುತ್ತಲಿನ ಅಂಗಡಿ ಮಾಲೀಕರು, ಸಾರ್ವಜನಿಕರು ದೇವಸ್ಥಾನ ಪ್ರವೇಶಿಸಿ ಆತನನ್ನು ಬಿಡಿಸಿ ನಂತರ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ABOUT THE AUTHOR

...view details