ರಾಷ್ಟ್ರೀಯ ಭಾಷೆ ಹಿಂದಿ ಕಲಿಯಲೇಬೇಕು: ಸಚಿವ ಸುರೇಶ್ ಅಂಗಡಿ - ಹಿಂದಿ ಭಾಷೆ
ಬೆಳಗಾವಿ: ನಾವು ಯಾವತ್ತೂ ಕನ್ನಡ ವಿರೋಧಿಯಲ್ಲ. ಆದ್ರೆ ಪ್ರಾದೇಶಿಕ ಭಾಷೆ ಜೊತೆಗೆ ನಮ್ಮ ರಾಷ್ಟ್ರೀಯ ಭಾಷೆ ಹಿಂದಿಯನ್ನು ಕಲಿಯಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ. ಕನ್ನಡದ ಜೊತೆಗೆ ಹಿಂದಿ ಕಲಿಯಬೇಕು ಅನ್ನೋದು ನಮ್ಮ ವಾದ ಎಂದರು. ಒಂದು ದೇಶ, ಒಂದು ಕಾನೂನು, ಒಂದು ಭಾಷೆ, ಒಂದು ವ್ಯವಸ್ಥೆ ಮಾಡಲು ಹೊರಟಿದ್ದೇವೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಹೇಳಿದ್ರು. ಇನ್ನು ಕನ್ನಡ ಭಾಷಾ ದಿನವನ್ನು ದೇಶಾದ್ಯಂತ ಯಾವಾಗ ಆಚರಿಸುತ್ತೀರಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಪ್ರಧಾನಿಗೆ ಪ್ರಶ್ನಿಸಿರುವ ಕುರಿತು ಸಚಿವ ಅಂಗಡಿ ಇದೇ ವೇಳೆ ಪ್ರತಿಕ್ರಿಯಿಸಿದರು.
Last Updated : Sep 15, 2019, 5:23 PM IST