ರಾಜ್ಯ ಸರ್ಕಾರಿ ನೌಕರರು, ಕೆಇಬಿ ನೌಕರರ ಸಂಘದಿಂದ ಸಿಎಂ ನಿಧಿಗೆ ಚೆಕ್ ನೀಡಿಕೆ - ಕೆಇಬಿ ನೌಕರರ ಸಂಘ
ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯರು ಹಾಗೂ ಕೆಇಬಿ ಎಂಪ್ಲಾಯಿಸ್ ಯೂನಿಯನ್ ಅಂಡ್ ಅಸೋಸಿಯೇಶನ್ ಪದಾಧಿಕಾರಿಗಳು ಸಿಎಂ ಬಿಎಸ್ವೈರನ್ನು ಭೇಟಿಯಾಗಿ ನೆರೆ ಪರಿಹಾರದ ಚೆಕ್ ವಿತರಿಸಿದರು. ಬಳಿಕ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ, ಕಳೆದ ವರ್ಷ ಕೊಡಗು ಭಾಗದಲ್ಲಿ ಉಂಟಾದ ಪ್ರಕೃತಿ ವಿಕೋಪ ಸಂದರ್ಭ ಸರ್ಕಾರಿ ನೌಕರರು ಒಂದು ದಿನದ ವೇತನವನ್ನು ಸಂಗ್ರಹಿಸಿ ಒಂದು ಕೋಟಿ ರೂಪಾಯಿ ನೀಡಿದ್ದರು. ಇಂದು ಈ ಭಾಗವು ಸೇರಿದಂತೆ ರಾಜ್ಯದ ಹಲವೆಡೆ ಉಂಟಾಗಿರುವ ಪ್ರಕೃತಿ ವಿಕೋಪ ಸಂಬಂಧ ಆಗಿರುವ ಹಾನಿಗೆ ನಾವು ಪರಿಹಾರ ರೂಪದಲ್ಲಿ ಒಂದಿಷ್ಟು ಸಾಂತ್ವನ ನೀಡಲು ಮುಂದಾಗಿದ್ದು, ತಿಂಗಳ ವೇತನದಲ್ಲಿ ಒಂದು ದಿನದ ಭತ್ಯೆ ಹಾಗೂ ವೇತನವನ್ನು ನೀಡಲು ನಿರ್ಧರಿಸಿದ್ದೇವೆ ಎಂದರು.