ಎಸ್ಪಿಬಿ ನಿಧನಕ್ಕೆ ಕಲಾಕೃತಿ ಮೂಲಕ ಸಂತಾಪ ಸೂಚಿಸಿದ ಕಲಾವಿದ - Artist condolences by artwork
ಸ್ವರ ಸಾಮ್ರಾಟ, ಸಂಗೀತ ಲೋಕದ ದಿಗ್ಗಜ ಎಸ್.ಪಿ.ಬಾಲಸುಬ್ರಹ್ಮಣ್ಯಂ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನಕ್ಕೆ ಕಲಾವಿದನೊಬ್ಬ ತಮ್ಮ ಕೆಲೆಯ ಮೂಲಕ ಸಂತಾಪ ಸೂಚಿಸಿದ್ದಾರೆ. ಧಾರವಾಡದ ಕೆಲಗೇರಿ ಗಾಯತ್ರಿಪುರದ ಕಲಾವಿದ ಮಂಜುನಾಥ ಹಿರೇಮಠ ಎಸ್ಪಿಬಿ ಅವರ ಭಾವಚಿತ್ರವನ್ನು ಮರಳಿನಲ್ಲಿ ಬಿಡಿಸಿ ಅಂತಿಮ ನಮನ ಸಲ್ಲಿಸಿದ್ದಾರೆ. ಸುಮಾರು ಒಂದು ಗಂಟೆಗೂ ಅಧಿಕ ಸಮಯದಲ್ಲಿ ಸ್ಯಾಂಡ್ ಆರ್ಟ್ ಮಾಡಿ ಎಸ್ಪಿಬಿ ಅವರಿಗೆ ಗೌರವ ಸಮರ್ಪಿಸಿದ್ದಾರೆ.