ಕರ್ನಾಟಕ

karnataka

ETV Bharat / videos

ಲಾಸ್ಟ್ ಬಾಲ್‌ನಲ್ಲಿ ಸಿಕ್ಸ್ ಹೊಡೆಯಲು ಬಂದ ಆರ್.ಅಶೋಕ! - kannada news

By

Published : Apr 21, 2019, 7:04 PM IST

ಬೀದರ್‌: ರಾಜ್ಯದಲ್ಲಿ ಎರಡನೇ ಹಂತದ ಮತದಾನಕ್ ಚುನಾವಣೆ ಪ್ರಚಾರ ಅಂತ್ಯಕ್ಕೆ ಕೆಲವೇ ಕ್ಷಣಗಳು ಬಾಕಿ ಇರುವಾಗ ಬಿಜೆಪಿ ಅಭ್ಯರ್ಥಿ ಸಂಸದ ಭಗವಂತ ಖೂಬಾ ನಗರದ ಪ್ರಮುಖ ವೃತ್ತಗಳಲ್ಲಿ ರೋಡ್ ಶೋ ನಡೆಸಿದರು. ನಗರದ ಗಣೇಶ ಮೈದಾನದಿಂದ ತಮ್ಮ ಅಪಾರ ಬೆಂಬಲಿಗರೊಂದಿಗೆ ತೆರೆದ ವಾಹನದಲ್ಲಿ ಭರ್ಜರಿ ಚುನಾವಣಾ ಪ್ರಚಾರ ಮಾಡಿದ್ರು. ಕಾರ್ಯಕರ್ತರು "ಭಾಲ್ಕಿ ವಾಲಾ ಚೋರ್ ಹೈ" "ಚೌಕಿದಾರ್ ಶೇರ್ ಹೈ" ಎಂದು ಕಾಂಗ್ರೆಸ್ ಅಭ್ಯರ್ಥಿ ಖಂಡ್ರೆ ವಿರುದ್ಧ ಘೋಷಣೆ ಕೂಗಿದ್ರು. ರೋಡ್ ಶೋನಲ್ಲಿ ಮಾಜಿ ಡಿಸಿಎಂ ಆರ್. ಅಶೋಕ್, ಎಂಎಲ್‌ಸಿ ರಘುನಾಥ್ ಮಲ್ಕಾಪುರೆ, ಜಿಲ್ಲಾಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಸೇರಿ ಇತರ ಮುಖಂಡರು ರೋಡ್ ಶೋನಲ್ಲಿ ಸಾಥ್ ನೀಡಿದರು.

ABOUT THE AUTHOR

...view details