'ಮಕ್ಕಳ ವಿಡಂಬನಾ ನಾಟಕ, ದೇಶದ್ರೋಹ ಹೇಗಾಗುತ್ತೆ.. ಕಲ್ಲಡ್ಕ ಭಟ್ ತನ್ನ ಶಾಲೆಯಲ್ಲಿ ಮಾಡಿಸಿದ್ದೇನು?- ಸಿದ್ದರಾಮಯ್ಯ - ದೇಶ ದ್ರೋಹದ ಕೇಸ್ ಆಗಲಿಕ್ಕೆ ಸಾಧ್ಯವೇ ಇಲ್ಲ ಎಂದ ಸಿದ್ದರಾಮಯ್ಯ
ಶಾಹಿನ್ ಶಿಕ್ಷಣ ಸಂಸ್ಥೆಯ ಶಾಲೆಯಲ್ಲಿ ವಿದ್ಯಾರ್ಥಿಗಳು ಮಾಡಿರುವುದು ವಿಡಂಬನಾ ನಾಟಕ, ದೇಶ ದ್ರೋಹದ ಕೇಸ್ ಆಗಲಿಕ್ಕೆ ಸಾಧ್ಯವೇ.. ಪುಟ್ಟ ಮಕ್ಕಳ ನಾಟಕಕ್ಕೆ ದೇಶದ್ರೋಹ ಅನ್ನೋದಾದ್ರೆ ಕಲ್ಲಡ್ಕ ಪ್ರಭಾಕರ್ ಭಟ್ ತನ್ನ ಶಾಲೆಯಲ್ಲಿ ಬಾಬ್ರಿ ಮಸೀದಿ ಧ್ವಂಸಗೊಳಿಸಿದ್ದ ಪ್ರಾತ್ಯಕ್ಷಿಕ ಮಾಡಿಸಿದ್ದ ಹಾಗಾದ್ರೆ ಅದೇನು, ಆತನ ವಿರುದ್ಧ ಯಾಕೆ ದೇಶದ್ರೋಹದ ಕೇಸ್ ಹಾಕಲಿಲ್ಲ ಅಂತಾ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಸುಳ್ಳು ಕೇಸ್ ದಾಖಲಿಸಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಜನರಲ್ಲಿ ಭಯ ಹುಟ್ಟಿಸಲು ಇಂತಹ ಕೇಸ್ ಹಾಕಲಾಗಿದೆ ಅಂತಾ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated : Feb 14, 2020, 8:06 PM IST