ಜಮೀನಿಗೆ ಹೋಗಲು ದಾರಿ ಮಾಡಿಕೊಡುವಂತೆ ಶಿಗ್ಗಾಂವಿ ತಾಲೂಕಿನ ರೈತರಿಂದ ಪ್ರತಿಭಟನೆ - Shiggaon Farmers News
ಶಿಗ್ಗಾಂವಿ: ತಾಲೂಕಿನ ಕಲ್ಯಾಣ ಗ್ರಾಮದ ರೈತರೊಬ್ಬರು ಸಂಚಾರಕ್ಕೆ ಅಡ್ಡಿಪಡಿಸಿ ರಸ್ತೆ ಬಂದ್ ಮಾಡಿದ್ದರಿಂದ ಇಲ್ಲಿನ ಹತ್ತಾರು ರೈತರು ತಮ್ಮ ತಮ್ಮ ಜಮೀನುಗಳಿಗೆ ತೆರಳಲಾಗುತ್ತಿಲ್ಲ. ಹಾಗಾಗಿ ತಮಗೆ ರಸ್ತೆ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೆಕೆಂದು ಆಗ್ರಹಿಸಿ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿದರು. ಕಳೆದ ಕೆಲವು ತಿಂಗಳು ಹಿಂದೆಯೇ ಈ ಬಗ್ಗೆ ತಾಲೂಕು ಆಡಳಿತದ ಗಮನಕ್ಕೆ ತರಲಾಗಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಿಸುತ್ತಿಲ್ಲ ಎಂದು ರೈತರು ತಮ್ಮ ನೋವು ತೋಡಿಕೊಂಡಿದ್ದಾರೆ.