ಸೇವಾಲಾಲರು ಹಾಕಿಕೊಟ್ಟ ಉತ್ತಮ ಮಾರ್ಗದಲ್ಲಿ ನಡೆಯುವಂತೆ ಶ್ರೀಗಳ ಕಿವಿಮಾತು
ರಾಣೆಬೆನ್ನೂರು ನಗರದಲ್ಲಿ ನಡೆದ ಸಂತ ಸೇವಾಲಾಲರ 281ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ ಸ್ವಾಮೀಜಿ ಉದ್ಘಾಟಿಸಿdರು. ಬಳಿಕ ಮಾತನಾಡಿದ ಶ್ರೀಗಳು, ಸರ್ದಾರ್ ಸೇವಾಲಾಲ ಸ್ವಾಮೀಜಿ ಚಿಕ್ಕವರಿದ್ದಾಗ ದೊಡ್ಡ ಪವಾಡ ಪುರುಷರಾಗಿದ್ದರು. ಮಣ್ಣಿನಿಂದ ಹುಗ್ಗಿ, ಕಲ್ಲಿನಿಂದ ವಾದಕ ರಚಿಸಿದ್ದರು. ಆಲದ ಗಿಡದಿಂದ ಊಟದ ಎಲೆ ತಯಾರಿಸುವ ಮೂಲಕ 14 ನೇ ಶತಮಾನದಲ್ಲಿ ಅಚ್ಚರಿ ಮೂಡಿಸಿದ ಮಹಾ ಪವಾಡ ಪುರುಷರಾಗಿದ್ದರು. ಸದ್ಯ ಸೇವಾಲಾಲರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಮ್ಮ ಲಂಬಾಣಿ ಜನಾಂಗ ನಡೆಯಬೇಕಾಗಿದೆ. ಆದರೆ ಈಗ ನಮ್ಮವರು ಮಾದಕವಸ್ತುಗಳು ಹಿಂದೆ ಬಿದ್ದು ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ದಯಮಾಡಿ ಇವುಗಳಿಂದ ದೂರವಿದ್ದು, ತಮ್ಮ ಜೀವನವನ್ನು ಕಟ್ಟಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ರು.