ಹುಟ್ಟುಹಬ್ಬ ಆಚರಿಸಲು ಹೋಗುತ್ತಿದ್ದ ವೇಳೆ ರಸ್ತೆ ಅಪಘಾತ: ಬಾಲಕಿ ದಾರುಣ ಸಾವು, ಇಬ್ಬರಿಗೆ ಗಾಯ - ಸಾರಿಗೆ ಬಸ್ಗೆ ಹಿಂಬದಿಯಿಂದ ಸ್ಕೂಟಿ ಡಿಕ್ಕಿ
ಕೊಪ್ಪಳ : ಸಾರಿಗೆ ಬಸ್ಗೆ ಹಿಂಬದಿಯಿಂದ ಸ್ಕೂಟಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಬಾಲಕಿ ಸ್ಥಳದಲ್ಲಿ ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ದೇವಲಾಪುರ ಬಳಿ ನಡೆದಿದೆ. ಭಾಗ್ಯನಗರ ಪಟ್ಟಣದ ಸ್ನೇಹಾ (15) ಮೃತ ಬಾಲಕಿ. ಘಟನೆಯಲ್ಲಿ ಗೌರಿ ಹಾಗೂ ತೇಜಸ್ವಿನಿ ಎಂಬ ಬಾಲಕಿಯರು ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಮೂವರು ಯುವತಿಯರು ಸ್ಕೂಟಿಯಲ್ಲಿ ಜನ್ಮ ದಿನದ ಆಚರಣೆಗೆ ದೇವಲಾಪುರ ಮಾರ್ಗವಾಗಿ ಹಿರೇಹಳ್ಳ ಡ್ಯಾಂಗೆ ಹೊರಟಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಈ ಸಂಬಂಧ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Mar 1, 2021, 7:45 AM IST